Discover millions of ebooks, audiobooks, and so much more with a free trial

Only $11.99/month after trial. Cancel anytime.

Kappunadhi
Kappunadhi
Kappunadhi
Ebook355 pages1 hour

Kappunadhi

Rating: 0 out of 5 stars

()

Read preview

About this ebook

ಯತಿರಾಜ್ ವೀರಾಂಬುಧಿ

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ.
1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ.
ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.)
ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ)
ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್.
ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
LanguageKannada
Release dateAug 12, 2019
ISBN6580207001014
Kappunadhi

Read more from Yathiraj Veerambudhi

Related authors

Related to Kappunadhi

Related ebooks

Reviews for Kappunadhi

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kappunadhi - Yathiraj Veerambudhi

    http://www.pustaka.co.in

    ಕಪ್ಪುನದಿ

    Kappunadi

    Author :

    ಯತಿರಾಜ್ ವೀರಾಂಬುಧಿ

    Yathiraj Veerambudhi

    For more books

    http://www.pustaka.co.in/home/author/yathiraj-veerambudhi

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕಪ್ಪುನದಿ

    ಮಲಗಿದ್ದವನು ಬೆಚ್ಚಿ ಕಣ್ಣುಬಿಟ್ಟೆ. ನನ್ನ ಸುತ್ತಲೂ ಗುಸಪಿಸನೆ ಆಡುತ್ತಿದ್ದ ಮಾತುಗಳು ಕೇಳಿಸಿದವು. ಅದೇನೆಂದು ಮೊದಲ ಕ್ಷಣದಲ್ಲಿ ನನಗೆ ತಿಳಿಯಲಿಲ್ಲ. ನಂತರ ತಟಕ್ಕನೆ ಹಾಸಿಗೆಯಲ್ಲಿಯೇ ಎದ್ದುಕುಳಿತೆ.

    ನನ್ನನ್ನೇ ನೋಡುತ್ತಿದ್ದ ಎರಡು ಮುಖಗಳು ಮ್ಲಾನವಾಗಿದ್ದವು. ಸಾವಿನ ಸುದ್ದಿಯನ್ನೇನಾದರೂ ಕೇಳಿರುವರೇನೋ ಎಂದೆನ್ನಿಸಿತು ಅವರನ್ನು ನೋಡಿದೊಡನೆ.

    ಅವರ ಮೌನ ಮುಂದುವರಿದಾಗ ನನಗೆ ನಿಜವಾಗಿಯೂ ಸಿಟ್ಟು ಉಕ್ಕಿ ಬಂದಿತ್ತು.  ಏನಾಯ್ತು? ಯಾರಾದ್ರೂ ಸತ್ತುಹೋಗಿದ್ದಾರಾ? ನಿಮ್ಮ ಮುಖಗಳ ಮೇಲೆ ಹಾಗಂತಾನೇ ಬರೆದಿದೆ!

    ಭಾಸ್ಕರ ಹಾಗೂ ಶಶಿಧರನೆಂಬ ನಾಮ ಹೊತ್ತ ಆ ಎರಡುಮುಖಗಳು ನನ್ನತ್ತಲೇ ದುಃಖದಿಂದ ನೋಡಿದವು.

    ``ಏನಾಗಿದೆ ನಿಮಗೆ? ನಾಲಿಗೆ ಬಿದ್ದು ಹೋಗಿದೆಯಾ?"ಸ್ವಲ್ಪ ಕಿರಿಕಿರಿಯಿಂದಲೇ ಕೇಳಿದೆ.

    ಇಲ್ಲ. ನಾವೊಬ್ಬ ಗೆಳೆಯನನ್ನು ಕಳಕೊಂಡಿದ್ದೀವಿ ``ಇಲ್ಲ ನೀನು ನಿನ್ನ ಗೆಳೆಯನನ್ನುಕಳೆದುಕೊಂಡಿದ್ದೀ" ಇಬ್ಬರೂ ಒಟ್ಟಿಗೇ ಮಾತಾಡಿದ್ದರಿಂದ ಅವರೇನು ಹೇಳುತ್ತಿರುವರೋ ಸರಿಯಾಗಿ ಅರ್ಥವಾಗಲಿಲ್ಲ.

    ``ನೀವ್ಯಾಕೆ ನನಗೆ ನಿಧಾನವಾಗಿ ವಿವರಿಸಬಾರದು?ಅದೂ ಒಬ್ಬರಾದ ಮೇಲೆ ಒಬ್ಬರು?"ಎಂದೆ ಬೇಸರದಿಂದ.

    ನಂತರ ಕಿಚನ್‍ನತ್ತ ನೋಡಿದೆ. ಶಶಿಧರ ನನ್ನ ನೋಟವನ್ನು ಅನುಸರಿಸಿ, ಇವತ್ತು ಕಾಫಿ ಮಾಡಬೇಕಾದವನು ಸತ್ತುಹೋಗಿದ್ದಾನೆ ಎಂದ.

    ಓಹ್! ಅಂದರೆ ಇವರಾರಿಗೋ ದೀಪಂಕರ ಉರ್ಫ್ ದೀಪೂ ಸತ್ತಿರುವ ಸುದ್ದಿ ಸಿಕ್ಕಿದೆ. ಅದು ಹೇಗೆ ಸಾಧ್ಯ? ಯಾರೋ ಜೋಕ್ ಮಾಡುತ್ತಿದ್ದಿರಬೇಕು.

    "ನಿಜವಾಗಿಯೂ ಅವರು ದೀಪು ಸತ್ತಿದ್ದಾನೆಂದು ಕಂಡುಕೊಂಡಿದ್ದಾರಾ?''

    ನನ್ನ ಪ್ರಶ್ನೆ ನನ್ನ ಕಿವಿಗಳಿಗೇ ವಿಚಿತ್ರವಾಗಿ ಕೇಳಿಸಿತು. ನಾನೇನು ಮಾತಾಡುತ್ತಿದ್ದೇನೆ?

    ಅಬ್ಬಾ! ನನಗೇನಾಗ್ತಿದೆ? ಅವರೇನು ಹೇಳುತ್ತಿದ್ದಾರೆ? ದೀಪೂ ಸತ್ತುಹೋಗಿದ್ದಾನೆಂದು ಹೇಳಲು ಪ್ರಯತ್ನಿಸುತ್ತಿದ್ದಾರೆ.

    ನನ್ನ ಚಡ್ಡಿ ದೋಸ್ತ್ ದೀಪು ಸತ್ತುಹೋಗಿದ್ದಾನೆ. ನನ್ನ ಎರಡೂ ಕೈಗಳಿಂದ ಕಪೋಲಗಳನ್ನು ಒತ್ತಿಹಿಡಿದು ಕಣ್ಮುಚ್ಚಿಕೊಂಡೆ.

    ಅದಕ್ಕೇ ನಾನು ಹೇಳಿದ್ದು ಅವನಿಗೆ ಅಷ್ಟು ಸಡನ್ನಾಗಿ ಹೇಳಬೇಡಾಂತ ಭಾಸ್ಕರ ಶಶಿಧರನನ್ನು ಗದರುತ್ತಿದ್ದ.

    ಬಿಡಯ್ಯಾ. ಯಾವತ್ತಿದ್ರೂ ಗೊತ್ತಾಗಬೇಕಾದ ವಿಷಯಾ ತಾನೇ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದ ಶಶಿಧರ್.

    ``ನನಗೆ ದಯವಿಟ್ಟು ಯಾರಾದರೊಬ್ಬರು ವಿವರವಾಗಿ ಹೇಳ್ತೀರಾ?'' ಎಂದು ನಿಧಾನವಾಗಿ ಪ್ರತಿಯೊಂದು ಪದವನ್ನೂ ಬಿಡಿಸಿ ಬಿಡಿಸಿ ಕೇಳಿದೆ.

    ಅವರಿಬ್ಬರಲ್ಲಿ ಸ್ವಲ್ಪ ಹೆಚ್ಚು ಸ್ಪಷ್ಟವಾಗಿ ಮಾತಾಡಬಲ್ಲವನಾಗಿದ್ದ ಭಾಸ್ಕರ ವಿವರಣೆ ನೀಡತೊಡಗಿದ.

    ಪಂಚತಾರಾ ಹೋಟೆಲ್ಲಿನ ಸ್ಟ್ಯೂವರ್ಡ್ ಕ್ವಾರ್ಟರ್ಸ್‍ನಲ್ಲಿ ದೀಪುವಿನ ದೇಹ ಸಿಕ್ಕಿತಂತೆ.

    "ಅವನು ಕೊಲೆಯಾಗಿದ್ದಾನಾ?'' ಕೇಳಿದೆ.

    ಇಲ್ಲ. ಅವನು ಮಲಕ್ಕೊಂಡಿರೋ ಹಾಗೇ ಸತ್ತುಹೋಗಿದ್ದಾನಂತೆ. ಕೈಯಲ್ಲೊಂದು ಕಾದಂಬರಿ ಇತ್ತಂತೆ. ಆ ರೂಮಿನಲ್ಲಿ ಇರಬೇಕಾಗಿದ್ದವನು ಮೂರು ದಿನಗಳಿಂದ ಮಾಯವಾಗಿದ್ದಾನಂತೆ. ದೀಪು ಅಲ್ಲಿಗೆ ಯಾಕೆ ಹೋದನೆಂದು ಯಾರಿಗೂ ಗೊತ್ತಿಲ್ವಂತೆಎಂದಭಾಸ್ಕರ.

    ``ಯಾವ ಕಾದಂಬರಿ?'' ಕೇಳಿದ ಶಶಿಧರ್.

    ``ಈ ಕೊಲೆ ನಾನು ಮಾಡಿದೆ" ಎಂದು ಅಪ್ರಯತ್ನವಾಗಿ ಉತ್ತರಿಸಿದ ಭಾಸ್ಕರ್, ಶಶಿಧರನತ್ತ ಸಿಟ್ಟಿನಿಂದನೋಡಿ ``ಎಂಥಾ ಪ್ರಶ್ನೆ!'' ಎಂದು ಗದರಿದ.

    ನಾನು ನಿಧಾನವಾಗಿ ಯಾರು ನಿನಗೆ ಈ ಡೀಟೈಲುಗಳನ್ನೆಲ್ಲಾ ಕೊಟ್ಟವರು? ಎಂದೆ.

    ``ನಾನು ದಿನಾಗ್ಲೂ ಜಾಗಿಂಗ್ ಹೋಗ್ತೀನÀಲ್ವಾ.... ಜಾಗಿಂಗ್ ದೇಹಕ್ಕೆ ಒಳ್ಳೆದಲ್ವಾ..." ಭಾಸ್ಕರ್ ಆರಂಭಿಸಿದ.

    ``ಈ ಬೇಡದ ವಿವರಗಳನ್ನೆಲಾ ್ಲಕತ್ತರಿಸಿ ಕೇವಲ ಮುಖ್ಯಾಂಶ ಹೇಳು ನನ್ನ ಕೋಪವನ್ನು ಅದುಮಿಟ್ಟುಕೊಳ್ಳುತ್ತಾ, ಹಲ್ಲು ಕಡಿಯುತ್ತಾ ಹೇಳಿದೆ. ``ನನ್ನ ಗೆಳೆಯನ ಸಾವಿನ ಸುದ್ದಿಯ ವಿಷಯ ಕೇಳೋಣಾಂದ್ರೆ ನೀನು ಬೇಡದ ಹರಟೆಯಲ್ಲಿ ಕಾಲಹರಣ ಮಾಡ್ತಿದ್ದೀ

    ಸಾರಿ! ನಾನು ಜಾಗಿಂಗ್‍ನಿಂದ ವಾಪ್ಸು ಬರೋವಾಗ ನಮ ್ಮಏರಿಯಾ ಪೊಲೀಸ್‍ಸ್ಟೇಷನ್ ಮುಂದಿಂದ ಬಂದೆ. ಆಗಲೇ ಸರ್ಕಲ್ ಇನ್ಸ್‍ಪೆಕ್ಟರ್ ಕೂಡಾ ಬಂದ್ರು. ನನ್ನನ್ನು ಕಂಡ ತಕ್ಷಣ ಗುರುತು ಹಿಡಿದ್ರು. ನಾನು ದಿನಾಗ್ಲೂ ಆತನನ್ನ ಪಾರ್ಕ್‍ನಲ್ಲಿ ಜಾಗ್ ಮಾಡುವಾಗ ನೋಡ್ತೀನಿ. ಈವತ್ಯಾಕಪ್ಪ ಇರಲಿಲ್ಲಾಂತ ಆಶ್ಚರ್ಯಪಟ್ಟೆ ಕೂಡಾ... ವಿಷಯಾಂತರವಾಗುತ್ತಿರುವುದನ್ನು ಗಮನಿಸಿದವನಂತೆ ವಿಷಯಕ್ಕೆ ವಾಪಸ್ಸು ಬರುತ್ತಾ, ``ನಿನಗೊಂದು ಕೆಟ್ಟ ಸುದ್ದಿಯಿದೆ ಎಂದು ಹೇಳಿದರು'' ಎಂದು ನನ್ನತ್ತ ತನ್ನ ತೋರು ಬೆರಳನ್ನು ಬೊಟ್ಟು ಮಾಡಿದ. ``ನಿನ್ನ ಫ್ರೆಂಡ್ಗೆ ಹೇಳು. ದೀಪಂಕರ್ ಸತ್ತುಹೋಗಿದ್ದಾನೇಂತ. ಪಂಚತಾರಾ ಹೋಟೆಲ್ಲಿನ ಸ್ಟ್ಯೂವರ್ಡ್ ಒಬ್ಬನ ರೂಮಲ್ಲಿ ಹೆಣ ಸಿಕ್ತೂಂತ"

    ಅವನು ಮಾತನ್ನು ನಿಲ್ಲಿಸಿದ್ದ ನನ್ನ ಕಂಗಳಲ್ಲಿ ತುಂಬಿಕೊಂಡಿದ್ದ ನೀರನ್ನು ನೋಡಿ.

    ನನ್ನ ಗೆಳೆಯ ದೀಪಂಕರ್, ತಿಪಟೂರಿನ ತೆಂಗಿನತೋಟದ ಸಾಹುಕಾರ ಅಂದಾನಪ್ಪನವರ ಏಕೈಕ ಸಂತಾನ ದೀಪು ಸತ್ತುಹೋಗಿದ್ದಾನೆ! ಈಗ ಅದರ ಪೂರ್ತಿ ಷಾಕ್ ನನಗಾಗಿತ್ತು.

    ನನ್ನ ಕಣ್ಮುಂದೆ ನನ್ನ ಬಾಲ್ಯ ಸರಸರನೆ ಓಡಿತ್ತು. ನನ್ನ ಬಾಲ್ಯದೊಂದಿಗೆ ಬೆರೆತುಹೋಗಿದ್ದ ದೀಪುವಿನ ಬಾಲ್ಯವೂ ಜ್ಞಾಪಕಕ್ಕೆ ಬಂದಿತು. ನಾವಿಬ್ಬರೂ ಒಂದೇ ಮನೆಯಲ್ಲಿದ್ದೆವು, ನನ್ನ ಐದನೇ ವರ್ಷದಲ್ಲಿ ನನ್ನ ತಾಯ್ತಂದೆಯರು ಅಪಘಾತವೊಂದರಲ್ಲಿ ತೀರಿಕೊಂಡಾಗಿನಿಂದ...

    ``ನಾನು ಬಾಡೀನ ನೋಡಬಹುದಾ?'' ಭಾಸ್ಕರನನ್ನು ಕೇಳಿದೆ.

    ಖಂಡಿತ. ನಿನಗಾಶ್ಚರ್ಯ ಆಗ್ಬಹುದು. ಅವನು ಸುಮ್ಮನೆ ಮಲಗಿರೋ ಹಾಗೆ ಕಾಣಿಸ್ತಾನೆ?.

    ``ನೀನು ಅವನನ್ನ... ಅದನ್ನನೋಡಿದೆಯಾ?''

    ಭಾಸ್ಕರ ತಬ್ಬಿಬ್ಬಾದ. ಕ್ಷಣ ಮಾತ್ರದಲ್ಲಿ ಚೇತರಿಸಿಕೊಂಡು, ಇಲ್ಲ, ಇನ್ಸ್‍ಪೆಕ್ಟರ್ ಅಬ್ದುಲ್ ಅಲೀಮ್ ಹೇಳಿದ್ರು.

    ದೀಪುವಿನ ದೇಹವನ್ನು ನೋಡಲು ಮೂವರೂ ಹೊರಟೆವು. ನನಗೆ ಯಾವ ವಾಹನವೂ ಇಲ್ಲದಿದ್ದುದರಿಂದ ಆಟೋ ಮೇಲೆ ಆಧಾರ ಪಡಬೇಕಿತ್ತು. ಭಾಸ್ಕರ್, ಶಶಿಧರ್ ನನ್ನನ್ನು ಅನುಸರಿಸಿದರು.

    ನಾನು ನನ್ನ ಆಫೀಸಿಗೆ ಫೋನು ಮಾಡಿದೆ. ಬಾಸ್‍ನ ಸೆಕ್ರೆಟರಿ ಸುಪ್ರಜಾ ಫೋನೆತ್ತುತ್ತಾಳೆ. ಆಕೆಗೆ ಹೇಳಿಬಿಟ್ಟರೆ ವಾಸಿ. ನನ್ನ ಬಾಸ್ ತೆಗೆದುಕೊಂಡರೆ ನನಗೆ ಗ್ರಹಚಾರ...ಹಲೋ... ಅಯ್ಯಯ್ಯೋ ಬಾಸ್! ಆದರೂ ಸಾವರಿಸಿಕೊಂಡು ``ಸಾರ್... ನಾನು.. ನನ್ನ ಫ್ರೆಂಡ್... ಅವನ ಹೆಣ ಸಿಕ್ಕಿದೆ ಆ ಪದವನ್ನು ನನ್ನ ಬಾಯಿಂದ ಹೊರತೆಗೆಯಲೇ ಕಷ್ಟಪಟ್ಟೆ. 'ದೀಪೂ, ನೀನು ನನ್ನಿಂದ ಶಾಶ್ವತವಾಗಿ ಹೋಗಿಬಿಟ್ಟೆ'...ಬಾಸ್ ಏನು ಹೇಳುತ್ತಿರುವರೆಂದು ತಿಳಿಯಲಿಲ್ಲ. ಸಾರ್..." ವರ್ತಮಾನಕ್ಕೆ ವಾಪಸ್ಸಾದೆ.

    ಮಧಾಹ್ನಬಂದ್ಬಿಡಿ ಎಂದು ಗದರುವಂತೆ ಹೇಳಿದರು.

    ನಾನು ಫೋನಿಟ್ಟುಬಿಟ್ಟು ಬೇಸರದಿಂದ ಹೊರಬಂದೆ.

    ಭಾಸ್ಕರ, ಶಶಿಧರ್ ಕೂಡಾ ತಂತಮ ್ಮಫೋನ್‍ಕರೆಗಳನ್ನು ಮುಗಿಸಿದಮೇಲೆ ಆಟೋ ಹಿಡಿದು ಪೊಲೀಸ್ ಠಾಣೆಗೆ ಹೊರಟೆವು.

    ನಾನು ಆಲೋಚಿಸುತ್ತಲೇಇದ್ದೆ. ಅಯ್ಯೋದೇವರೇ! ದೀಪುವಿನ ತಾಯ್ತಂದೆಯರಿಗೆ ಈ ವಿಷಯವನ್ನು ಎಚ್ಚರಿಕೆಯಿಂದ ಹೇಳಬೇಕು. ಹೇಗೆ ತೆಗೆದುಕೊಳ್ಳುತ್ತಾರೋ? ತಂದೆ ತಕ್ಷಣವೇ ಪ್ರಜ್ಞೆತಪ್ಪಿ ಹಾಸಿಗೆ ಹಿಡಿಯುತ್ತಾರೆ.ಮೊದಲೇ ಒಣಗಿಹೋದಂತಿರುವ ತಾಯಿ ಕೂಡಾ ಕುಸಿದುಬಿಡಬಹುದು. ಆ ದೊಡ್ಡ ತೋಟದ ಗತಿಯೇನು?

    ಅದೃಷ್ಟವೆಂದರೆ ದೀಪುವಿಗೆ ಮದುವೆಯಾಗಿಲ್ಲ. ಆದರೂ ಅದೇನೂ ಈ ಸಂದರ್ಭಕ್ಕೆ ಸಹಾಯವಾಗುವುದಿಲ್ಲ!

    ಆಟೋ ಪೊಲೀಸ್‍ಸ್ಟೇಷನ್ನಿನ ಮುಂದೆ ನಿಂತಿತು. ಉಳಿದಿಬ್ಬರನ್ನು ಮೌನವಾಗಿ ಹಿಂಬಾಲಿಸಿದೆ. ಯಾಕೋ ಪೊಲೀಸ್ ಠಾಣೆ ಎಂದರೆ ನನಗೆ ಭೀಭತ್ಸ ಭಾವನೆಯುಂಟಾಗುತ್ತದೆ. ದಿನವೂ ಪೇಪರುಗಳಲ್ಲಿ ಓದುವ ಲಾಕಪ್‍ಡೆತ್‍ಗಳ ಪ್ರಭಾವವೋ ಏನೋ?

    ಸರ್ಕಲ್ ಇನ್ಸ್‍ಪೆಕ್ಟರ್ –ಕ್ರೈಮ್ ಬ್ರಾಂಚ್ ಅಬ್ದುಲ್‍ಅಲೀಮ್ ನಮ್ಮನ್ನು ಮೌನವಾಗಿಯೇ ಆಹ್ವಾನಿಸಿದರು. ನನ್ನ ಬೆನ್ನಿನ ಮೇಲೆ ಮೆಲ್ಲನೆ ತಟ್ಟಿದರು. ನಾನು ಸುಮ್ಮನೆ ತಲೆದೂಗಿದೆ.

    "ಬಾಡೀನ ನೋಡಬಹುದಾ?'' ಭಾಸ್ಕರ್ ಕೇಳಿದ.

    ``ಷ್ಯೂರ್!'' ಅಬ್ದುಲ್‍ಅಲೀಮ್ ಹೇಳಿದರು. ನಂತರ ಟೆಲಿಫೋನ್ ರಿಸೀವರ್ ಎತ್ತಿ ಯಾರೊಂದಿಗೋ ಮಾತಾಡಿದರು. ಆ ಕಡೆಯ ಸಂಭಾಷಣೆಯನ್ನು ಕೇಳಿಸಿಕೊಂಡರು. ನಂತರ ರಿಸೀವರ್ ಕ್ರೆಡಲ್ ಮಾಡಿ, ನೀವುಸರ್ಕಾರಿ ಆಸ್ಪತ್ರೆಗೆ ಹೋಗ್ಬೇಕು ಎಂದರು.

    "ಯಾಕೆ?'' ಬಾಸ್ಕರ, ಶಶಿಧರರ ಮುಖಗಳ ಮೇಲೆ ವಿಭ್ರಮೆ, ವಿಸ್ಮಯಗಳು ಕಾಣಿಸಿಕೊಂಡಿದ್ದವು.

    ಹೆಣವಿದ್ದ ರೂಮು ಲಾಕ್ ಮಾಡಲ್ಪಟ್ಟಿತ್ತು. ಡಾಕ್ಟರು, ಪೊಲೀಸ್ ಸಬ್ ಇನ್ಸ್‍ಪೆಕ್ಟರುಗಳ ಸಮಕ್ಷಮದಲ್ಲಿ ರೂಮಿನ ಬೀಗ ಒಡೆಯಲಾಯಿತು. ಯಾಕೆ ಒಂದು ಛಾನ್ಸ್ ತಗೊಳ್ಳೋದು ಅಂತ ಬಾಡೀನ ಗವರ್ನಮೆಂಟ್ ಆಸ್ಪತ್ರೆಗೆ ಸಾಗ್ಸಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ

    ನಾನು ನನ್ನ ಧ್ವನಿಯನ್ನು ಹೊರತೆಗೆದೆ "ಅದು ಸ್ವಾಭಾವಿಕ ಸಾವಲ್ಲವಾ? ಯಾವುದಾದರೂ ಫೌಲ್ ಪ್ಲೇ ಸಸೆÀ್ಪಕ್ಟ್ ಮಾಡ್ತಿದ್ದೀರಾ?'' ನನ್ನ ಧ್ವನಿ ಸಣ್ಣಗೆ ಕಂಪಿಸಿತು.

    ನನ್ನ ಆಲೋಚನೆಗೇ ಉಳಿದವರಿಬ್ಬರೂ ಒಟ್ಟಿಗೇ ಮಾತಿನ ರೂಪ ಕೊಟ್ಟಾಗ ನನಗೆ ಆಶ್ಚರ್ಯವಾಗಿತ್ತು.

    ``ಯಾಕೆ? ದೀಪೂಗೆ ಯಾರೂ ವೈರಿಗಳೇ ಇರಲಿಲ್ಲವಲ್ಲಾ?''

    ``ನೋಡಿ! ನಾವು ಯಾರನ್ನೂ ಸಂಶಯಿಸುತ್ತಿಲ್ಲ. ಇದೊಂದು ಮಾಮೂಲೀ ತಪಾಸಣೆ. ಹೆಣ ಸಿಕ್ಕಿದ್ದು ಸಾವಿನ ಎರಡುದಿನಗಳ ನಂತರ. ಅದರಿಂದ ಇದನ್ನೆಲ್ಲಾ ಮಾಡಬೇಕಾಯ್ತು"

    ಕೆಲವು ನಿಮಿಷಗಳ ನಂತರ ನಾವು ಸರ್ಕಾರೀ ಆಸ್ಪತ್ರೆಯಿಂದ ಹೊರಟೆವು. ಆಟೋ ಚಾಲನೆಗೆ ಬಂದೊಡನೆ ನನ್ನಆಲೋಚನೆಗಳು ಓಡಲಾರಂಭಿಸಿದವು. ನಾನು ತಿಪಟೂರಿನ ಅವನ ಮನೆಗೆ ಬಂದಾಗ ನನಗೆ ಐದು ವರ್ಷ. ನಾನೆಷ್ಟು ಮುದ್ದಾಗಿದ್ದೆನೆಂದರೆ ದೀಪುವಿನ ತಾಯಿ ನನ್ನನ್ನು ತುಂಬಾ ಇಷ್ಟಪಡುತ್ತಿದ್ದರು. ಮುದ್ದು ಮಾಡುತ್ತಿದ್ದರು. ಅವರಿಂದಲೇ ನಾನು ಅವರ ಮನೆಯಲ್ಲಿಯೇ ಇರತೊಡಗಿದ್ದೆ. ಅದೃಷ್ಟವೋ, ದುರಾದೃಷ್ಟವೋ ನಾನು ಅವರ ಮನೆಗೆ ಸೇರಿಕೊಂಡ ಒಂದು ತಿಂಗಳಲ್ಲಿ ನನ್ನ ತಾಯ್ತಂದೆಯರು ಆಕಸ್ಮಿಕವೊಂದರಲಿ ್ಲತೀರಿಕೊಂಡಿದ್ದರು. ನನಗೆ ಬೇರೆ ಯಾರೂ ಇಲ್ಲದಿದ್ದುದರಿಂದ ದೀಪುವಿನ ಮನೆಯಲ್ಲಿಯೇ ವಾಸ ಮಾಡಬೇಕಾಗಿ ಬಂದಿತು.

    ಅಂದಾನಪ್ಪ, ರೇಣುಕಮ್ಮ ನನ್ನನ್ನು ನಿಜವಾಗಿಯೂ ಚೆನ್ನಾಗಿಯೇ ನೋಡಿಕೊಂಡಿದ್ದರು. ಆದರೂ...

    ಆಸ್ಪತ್ರೆಯ ಸಿಬ್ಬಂದಿ ನಮ್ಮನ್ನು ಒಳಗೆ ಕರೆದೊಯ್ದರು. ಪೋಸ್ಟ್ ಮಾರ್ಟಂ ಕೊನೆಯ ಹಂತವನ್ನು ಮುಟ್ಟುತ್ತಿದೆಯೆಂಬ ಸುದ್ದಿಯೂ ಸಿಕ್ಕಿತು.

    ಸರ್ಕಾರಿ ಆಸ್ಪತ್ರೆಯಲ್ಲವೇ? ಅವರದೇ ಆದ ಸಮಯ ತೆಗೆದುಕೊಳ್ಳತೊಡಗಿದರು.

    ನಾನು ನನ್ನ ಹಳೆಯ ದಿನಗಳ ನೆನಪಿನಲ್ಲಿ ಮುಳುಗಿಹೋದೆ.

    ``ನಿಮ್ಗೆ ಗೊತ್ತೇನಮ್ಮಾ?'' ಏಳ್ನೇ ಕಾಸಲ್ಲಿ ್ಲಎಲ್ಲರಿಗಿಂತ ಜಾಸ್ತಿ ಯಾರಿಗೆ ಮಾಕ್ರ್ಸ್ ಬಂದಿದೆ ಗೊತ್ತೇನಮ್ಮಾ? ಸ್ಕೂಲ್ ಟೀಚರ್ ಗಂಗಣ್ಣ ರೇಣುಕಮ್ಮನನ್ನು ಕೇಳಿದರು. ``ನಿಮ್ಮ ಮಗ ದೀಪಂಕರ!" ಎಂದು ಉದ್ಗರಿಸಿದರು.

    ರೇಣುಕಮ್ಮ ತಕ್ಷಣವೇ ಅಡುಗೇ ಮನೆಗೆ ಓಡಿ ಸಿಹಿ ತಗೊಂಡು ಬಂದರು.

    ``ನನಗೆ ಖಂಡಿತ ಗೊತ್ತಿತ್ತು ಮೇಷ್ಟ್ರೇ. ನನ್ನ ದೀಪು ಮಹಾ ಬುದ್ಧಿವಂತ ಅಂತ. ಅದಕ್ಕೇ ನಾನು ಮೊದಲೇ ಸ್ವೀಟ್ ಮಾಡಿಟ್ಟುಬಿಟ್ಟಿದ್ದೆ" ಎಂದು ಹೆಮ್ಮೆಯಿಂದ ಬೀಗಿದರು.

    ``ಇನ್ನು ಇವನು ಹೇಗೆ ಮೇಷ್ಟ್ರೇ?''

    ಇವನಾ? ಗೊತ್ತೇ ಇದೆಯಲ್ಲಾ, ಜೀವನಾಂಶಕ್ಕೆ ಮೋಸ ಇಲ್ಲ. ಮಾಮೂಲೀ ಥರ್ಡ್ ಕ್ಲಾಸ್ನಲ್ಲಿ ಪಾಸಾಗಿದ್ದಾನೆ

    ಬಿಡಿ ಮೇಷ್ಟ್ರೇ, ಎಲ್ರೂ ಬುದ್ಧಿವಂತರಾಗೋಕ್ಕೆ ಸಾಧ್ಯವೇನು? ಇವನು ಹೇಗೇ ಇದ್ರೂ ನನ್ನ ಮುದ್ದುಮಗ ಎಂದು ಹೇಳಿ ನನ್ನನ್ನು ಮುದ್ದು ಮಾಡುತ್ತಿದ್ದರು. ನಾನು ಸಂತೋಷದಿಂದ ಪಿಳಿಪಿಳಿ ಕಣ್ಣುಬಿಡುತ್ತಿದ್ದೆ.

    ಹೀಗೇ ದೀಪು ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗುತ್ತಲೇಹೋದ. ನಾನು ಮಾಮೂಲೀ ಪಾಸ್‍ಕ್ಲಾಸ್!

    ನನ್ನ ಸಾಕು ತಂದೆಯ ಮಾತುಗಳ ನೆನಪು ನುಗ್ಗಿ ಬಂದಿತು.

    ``ನನಗೆ ಎರಡು ಮಕ್ಕಳು. ನಮ್ಮ ದೀಪು ಮತ್ತೆ ಇವನು. ದೀಪು ಬಿಡಿ ತುಂಬಾನೇ ಬುದ್ಧಿವಂತ, ಜಾಣ. ಅವನೇನಾದರೂ ಹಾರಿಹೋಗೋಕ್ಕೆ ಮನಸ್ಸು ಮಾಡಿದರೆ ನಾನು ಅವನನ್ನು ಹಿಡಿದಿಟ್ಟುಕೊಳ್ಳೋಕ್ಕಂತೂ ಸಾಧ್ಯವಿಲ್ಲ. ಆದರೆ ಈ ಛೋಟೂ ಇದ್ದಾನೆ ನೋಡಿ, ಇವನು ನನ್ನ ಜೊತೆ ಸದಾ ಇದ್ದೇ ಇರ್ತಾನೆ" ಎಂದಿದ್ದರು ಒಮ್ಮೆ.

    ಆಗ ರೇಣುಕಮ್ಮ ಅವರನ್ನು ರೇಗಿಸಿದ್ದರು. ``ಈ ಆಸ್ತಿಯೆಲ್ಲಾ ನಿಮ್ಮ ಸ್ವಯಾರ್ಜಿತ. ಯಾರಿಗೆ ಬೇಕಾದ್ರೂ ಕೊಡಬಹುದು. ಒಂದು ವೇಳೆ ನಿಮ್ಮ ಪ್ರೀತಿಯ ದೀಪು ಎಲ್ಲವನ್ನೂ ಬಿಟ್ಟು ಹೊರಟುಹೋದ್ರೆ, ಯಾರು ನೋಡಿಕೊಳ್ತಾರೆ ಈ ಅಪರೂಪವಾದ ಆಸ್ತೀನ? ಯಾರಿಗೆ ಕೊಡ್ತೀರಿ?"

    ಯಾಕೆ? ಈ ನನ್ನ ಮಗ ಇದ್ದಾನಲ್ಲಾ. ಒಂದು ವೇಳೆ ದೀಪು ಎಲ್ಲಾದ್ರೂ ದೂರವಾಗಿ ಹೊರಟುಹೋದರೆ ಎಲ್ಲವನ್ನೂ ಇವನ ಹೆಸರಿಗೆ ಬರೆದುಬಿಡ್ತೀನಿ ಎಂದು ನನ್ನನ್ನು ಮುದ್ದಿಸಿದ್ದರು.

    ರೇಣುಕಮ್ಮ ಸಿಟ್ಟು ಮಾಡಿಕೊಂಡು, ``ದೀಪು ಬಗ್ಗೆ ಎಂಥಾ ಮಾತಾಡ್ತೀರಿ? ಛೀ! ಬಿಡ್ತೂನ್ನಿ" ಎಂದು ಹೊರಟುಹೋಗಿದ್ದರು. ನಾನುನನ್ನ 'ಅಪ್ಪ'ನನ್ನು ತಬ್ಬಿಕೊಂಡು ``ನನಗೆ ನಿಮ್ಮ ಪ್ರೀತಿ ಮಾತ್ರಬೇಕು ಎಂದಿದ್ದೆ...

    ದೀಪುವಿನ ದೇಹವನ್ನು ಹೊರಕ್ಕೆ ತಂದಿದ್ದರು. ಅದನ್ನು ನೋಡಲಾರದೇ ನಾನು ನನ್ನ ಮುಖವನ್ನು ಪಕ್ಕಕ್ಕೆ ತಿರುಗಿಸಿಕೊಂಡೆ.

    ಡಾಕ್ಟರು ಭಾಸ್ಕರ್, ಶಶಿಧರರೊಂದಿಗೆ ಗಂಭೀರವಾಗಿಮಾತಾಡುತ್ತಿದ್ದರು. ನಾನು ಸ್ವಲ್ಪ ದೂರದಲ್ಲಿ ನಿಂತು ಈ ದುಃಖಮಯ ಘಟನೆಯ ಬಗ್ಗೆ ಚಿಂತಿಸುತ್ತಿದ್ದೆ.

    "ಇದನ್ನ ನಂಬೋಕ್ಕೆ ಸಾಧ್ಯಾನೇ ಇಲ್ಲ. ಹೀಗಾಗಲು ಹೇಗೆ ಸಾಧ್ಯ?'' ಭಾಸ್ಕರನ ಧ್ವನಿ ಸ್ವಲ್ಪ ಜೋರಾಗಿಯೇ ಕೇಳಿಸಿದಾಗ ಟಕ್ಕನೆ ತಲೆಯೆತ್ತಿ ನೋಡಿದೆ.

    ಶಶಿಧರ ಅವನ ಕೈಯನ್ನು ಭಾಸ್ಕರನ ತೋಳಿನ ಮೇಲಿಟ್ಟು ಒತ್ತುತ್ತಿದ್ದ. ಅಷ್ಟು ಗಟ್ಟಿಯಾಗಿ ಮಾತಾಡಬೇಡವೆಂದಿರಬಹುದು. ನನ್ನ ಮೈಮೇಲೆ ಜೇಡರಹುಳುಗಳು ಓಡಾಡಿದಂತಾಯಿತು. ಏನಾಗುತ್ತಿದೆ? ಏನಾದರೂ ಕುತಂತ್ರ ನಡೆದಿದೆಯೇ? ಹಿಮದ ನೀರು ನನ್ನ ರಕ್ತದಲ್ಲಿ ಪ್ರವೇಶಿಸಿದಂತೆ ಮರಗಟ್ಟಿಹೋದೆ. ಆದರೂ ನನಗೆ ಅವರುಗಳ ಹತ್ತಿರ ಹೋಗುವ ಮನಸ್ಸಾಗಲಿಲ್ಲ. ನಾನು ಯಾವ ಕೆಟ್ಟ ವಿಷಯವನ್ನೂ ಕೇಳಲು ತಯಾರಿರಲಿಲ್ಲ. ನನ್ನ ಹೃದಯ ಏನೋ ಕೇಡು ಶಂಕಿಸಿತು.

    ``ನಾವು ಬಾಡೀನ ತಗೊಂಡು ಹೋಗ್ಬಹುದಾ?'' ಭಾಸ್ಕರ ಕೇಳಿದ.

    ``ಇಲ್ಲ. ಅದಕ್ಕೂ ಮೊದಲು ನಾನು ಈ ಏರಿಯಾ ಪೋಲಿಸ್ ಇನ್ಸ್‍ಪೆಕ್ಟರಿಗೆ ಫೋನ್ಮಾಡ್ಬೇಕು" ಡಾಕ್ಟರರ ಧ್ವನಿಯಲ್ಲಿ ಖಚಿತತೆಯಿತ್ತು.

    ``ಪೋಲಿಸ್ಯಾಕೆ? ಅನುಮಾನ ಬರುವಂತಹ ಸೂಚನೆಗಳೇನಾದರೂ ಪೋಸ್ಟ್ ಮಾರ್ಟಂನಲ್ಲಿ ಸಿಕ್ಕಿವೆಯೇ?''

    ಅಂದರೆ ದೀಪು ಕೊಲೆ...! ಓಹ್... ನಾನೇನು ಯೋಚಿಸುತ್ತಿದ್ದೇನೆ? ಈಗ ಈ ವಿಷಯವನ್ನು ಅವನ ತಾಯ್ತಂದೆಯರಿಗೆ ಹೇಗೆ ಹೇಳಲಿ? ಏನುಮಾಡಲಿ?

    ಮತ್ತೆ ಸುಮಾರು ಹೊತ್ತು ಕಾಯುತ್ತಾ ಕುಳಿತಿರಬೇಕಾಯಿತು. ಈ ಸಲ ಕಾಯುವಿಕೆ ಇನ್ಸ್‍ಪೆಕ್ಟರ್‍ನ ಆಗಮನಕ್ಕಾಗಿ. ನಾವು ನಿರೀಕ್ಷೆಯನ್ನು ಮುಂದುವರಿಸಿದೆವು........

    ದೀಪು ತುಂಬಾ ಒಳ್ಳೆಯವನು. ಅವನ ಸರಳ ನಡವಳಿಕೆ ನೋಡಿದವರು ಇವನು ಅಷ್ಟು ಶ್ರೀಮಂತನೆಂದೂ, ವಿದ್ಯಾವಂತನೆಂದೂ ತಿಳಿಯುತ್ತಲೇಇರಲಿಲ್ಲ. ತುಂಬಾ ಸೌಮ್ಯ ವ್ಯಕ್ತಿ ಕೂಡಾ. ನಾನೆಷ್ಟು ತರಲೆ ಮಾಡಿದರೂ ಅವನಿಗೆ ನನ್ನ ಮೇಲೆ ಕೋಪ ಬರುತ್ತಿರಲಿಲ್ಲ. ನಾನು ಅವನ ಶರಟನ್ನು ಧರಿಸಿಬಿಟ್ಟರೆ ನೀನೇ ಇಟ್ಕೋ ಎಂದುಬಿಡುತ್ತಿದ್ದ. ಮತ್ತೆಂದೂ ಆ ಶರಟನ್ನು ವಾಪಸ್ಸು ಕೇಳುತ್ತಿರಲಿಲ್ಲ.

    ನಿಜವಾದ ಅರ್ಥದಲ್ಲಿ ಅಣ್ಣನಾಗಿದ್ದ ನನಗೆ. ಅನೇಕ ವಸ್ತುಗಳನ್ನು ನನಗೆ ಕೊಟ್ಟು ಬಿಡುತ್ತಿದ್ದ, ಒಂದು ದಿವಸ ಪೆನ್ನು ಕೊಟ್ಟರೆ, ಮತ್ತೊಂದು ದಿನ ಅವನ ಬೈಸಿಕಲ್ಲು.

    ತುಂಬಾ ಬುದ್ಧ್ದಿವಂತನಾದ್ದರಿಂದ ಇಂಜಿನಿಯರಿಂಗ್ ಪಾಸ್ ಮಾಡಿ ಎಂ.ಬಿ.ಎ.ಗೆ ಸೇರಿಕೊಂಡ. ನಂತರ ಅದನ್ನೂ ರ್ಯಾಂಕಿನೊಂದಿಗೆ ಮುಗಿಸಿ ಅತ್ಯಂತ ಆಕರ್ಷಕ ಸಂಬಳವಿದ್ದ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ಆಗಿ ದೊಡ್ಡ ಕಂಪನಿಯೊಂದನ್ನು ಸೇರಿಕೊಂಡ.

    ನಾನು ಅವನಿಗೆ ತದ್ವಿರುದ್ದ. ನಾನು ಯಾವಾಗಲೂ ಜೀವನಾಂಶ ತೆಗೆದುಕೊಂಡು 'ಅಬ್ಬಾ! ಬದುಕಿದೆ!'' ಎನ್ನುವ ಹಾಗೆ ಪ್ರತೀಸಲ ಎದೆಡವಡವವೆನ್ನಿಸಿಕೊಳ್ಳುತಲೇ ಅತ್ಯಂತ ಕಡಿಮೆ ಮಾರ್ಜಿನ್‍ನಲ್ಲಿ ಪಾಸಾಗುತ್ತಿದ್ದೆ.

    ಹೇಗೋ ಪಾಸ್ ಮಾಡಿ ಈ ದೊಡ್ಡನಗರ ಬೆಂಗಳೂರಿಗೆ ಬಂದೆ. ಬಹಳ ಕಾಲ ಕೆಲಸಕ್ಕಾಗಿ ಅಲೆದೂ ಅಲೆದೂ ಸುಸ್ತಾದೆ........ ಶಬ್ದವೇನೋ ಆದಾಗ ಭಾಸ್ಕರ, ಶಶಿಧರರೊಂದಿಗೆ ನಾನೂ ಎದ್ದು ನಿಂತುಕೊಂಡೆ.

    ಬಾಗಿಲಿನಲ್ಲಿ ಆಕೃತಿಯೊಂದು ಕಂಡಿತು. ಕ್ರಮೇಣ ಹತ್ತಿರವಾಗುತ್ತಿದ್ದ ಆ ಖಾಕಿಬಟ್ಟೆಯ ಮನುಷ್ಯ ತುಂಬಾ ಸ್ಟೈಲಾಗಿ ನಡೆಯುತ್ತಾ ಹತ್ತಿರ ಬಂದ. ಸುಮಾರು ಮೂವತ್ತರ ಆಸುಪಾಸಿನ ವಯಸ್ಸುಳ್ಳ, ಬುದ್ಧಿವಂತಿಕೆಯ ಲಕ್ಷಣವಿದ್ದ ಸುಂದರಮುಖ. ಆ ವದನಕ್ಕೆ ಸರಿಯಾದ ಎತ್ತರವಾದ ಹ್ಯಾಂಡ್‍ಸಮ್ ದೇಹವನ್ನು ಕೂಡಾ ಅವನಿಗೆ ದೈವ ಬಳುವಳಿಯಾಗಿ ನೀಡಿತ್ತು. ಅವನು ಡಾಕ್ಟರ್ ಅಬ್ರಹಾಂರನ್ನು ಭೇಟಿಯಾಗಲು ಹೋದ. ಡಾಕ್ಟರ್ ಅಬ್ರಹಾಂ ನಮ್ಮ ದೀಪುವಿನ ದೇಹದ ತಪಾಸಣೆ ನಡೆಸಿದವÀರು. ಅವನು ಅವರ ಛೇಂಬರ್ ಒಳಗೆ ಹೋದ ಮೇಲೆ ಬಾಗಿಲು ಮುಚ್ಚಿಕೊಂಡಿತು...

    ಇವತ್ತೇಕೋ ನನಗೆ ದೀಪುವಿನ ನೆನಪು ನುಗ್ಗಿ ನುಗ್ಗಿ ಬರುತ್ತಲೇ ಇದೆ. ನನ್ನ ಓದು ಕುಂಟುತ್ತಾ ಮುಗಿದಾಗ ನನ್ನ 'ತಾಯ್ತಂದೆ'ಯರ ಆಣತಿಯಂತೆ ಹಾಗೂ ಅದು ನನ್ನ ಹಕ್ಕೆಂಬಂತೆ ದೀಪುವನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ಅವನಂತೂ ನನ್ನನ್ನು ತೆರೆದ ಬಾಹುಗಳಿಂದ ಆಹ್ವಾನಿಸಿದ್ದ.

    ಅವನೊಂದಿಗೆ ಅವನ ಇಬ್ಬರು ಸಹೋದ್ಯೋಗಿಗಳಿದ್ದರು. ನಾನು ದೀಪುವಿನ 'ತಮ್ಮನಾದ್ದರಿಂದ’ ನನಗೆ ವಿಶೇಷ ಮನ್ನಣೆ ದೊರೆಯಿತು. ನಾನು ಎಷ್ಟು ಆರಾಮವಾಗಿದ್ದೆನೆಂದರೆ ಕೆಲಸ ಹುಡುಕಲು ಬಂದಿರುವೆನೆಂಬ ವಿಷಯ ಕೂಡಾ ನನಗೆ ಮರೆತುಹೋಗಿತ್ತು!

    ಕೊನೆಗೂ ನನಗೂ ಒಂದು ಕೆಲಸ ಸಿಕ್ಕಿತು. ಒಂದು ಖಾಸಗಿ ಕಂಪನಿಯಲ್ಲಿ ಪುಟ್ಟ ಕೆಲಸ. ಈಗ ನನ್ನ ದುಃಸ್ವಪ್ನವಾಗಿ ಬಿಟ್ಟಿರುವ ಉದ್ಯೋಗ ಅದು......

    ಬಾಗಿಲು ತೆರೆದುಕೊಂಡಿತು. ಇನ್ಸ್‍ಪೆಕ್ಟರ್ ನೇರವಾಗಿ ನಮ್ಮ ಬಳಿಗೇ ಬಂದ. ಅತ್ಯಂತ ಗಂಭೀರವಾಗಿ, ಹಲೋ, ನಾನು ಇನ್ಸ್‍ಪೆಕ್ಟರ್ ಅಭಿಮನ್ಯು. ಸ್ಪೆಷಲ್ ಡ್ಯೂಟಿ .ಹೋಮಿಸೈಡ್ ಎಂದ. ಆಕರ್ಷಕ

    Enjoying the preview?
    Page 1 of 1